O Darigane Priya Neehigan



  • Title: O Darigane Priya Neehigan
  • Genre: Sangha
  • Language: Kannada
  • Length: 4:51 minutes (4.44 MB)
  • Format: MP3 Stereo 44kHz 128Kbps (CBR)
If you have the lyrics (words) of this song, please send it to us by submitting it in the comments section below. Thanks!

Can we get a karaoke of this song please? Thanks.

Lyrics:
ಓ ದಾರಿಗನೇ ಪ್ರಿಯ ನೇಹಿಗನೇ, ಗೈಯುವ ಬಾ ನವಯುಗ ನಿರ್ಮಾಣ
ಸಮಾಜದೇವತೆಗರ್ಪಿತವಾಗಲಿ ನಮ್ಮೆಲ್ಲ ತನು ಮನ ಧನ ಪ್ರಾಣ || ಓ ದಾರಿಗನೇ ಪ್ರಿಯ ನೇಹಿಗನೇ ||

ಹಿಡಿಕೂಳಿನ ಬರಿಗೋಳಿನ ಬಾಳಿಗೆ ಮಾರುವೆಯಾ ತನುಮನವನು ಗೆಳೆಯಾ ? |2|
ಪಶುಬಲದಿದಿರಿಗೆ ಅಡಿಯಾಳಾಗುತ ಮರೆಯುವೆಯಾ ಮಾನವ್ಯದ ಗುರಿಯ ? || ಓ ದಾರಿಗನೇ ಪ್ರಿಯ ನೇಹಿಗನೇ ||

ಭ್ರಮೆಯನು ಕೊಡವಿಕೊ ಕಣ್ತೆರೆದರಿತುಕೋ ಮಾನವ ಜೀವನದನಂತ ಮಹಿಮೆ |2|
ಬಿಸಿಯಾರುವ ಮೊದಲೇ ಜಗವರಿಯಲಿ ನಿನ್ನಯ ಪವಿತ್ರ ರಕ್ತದ ಹಿರಿಮೆ || ಓ ದಾರಿಗನೇ ಪ್ರಿಯ ನೇಹಿಗನೇ ||

ಇಚ್ಚಾಶಕ್ತಿಯು ಭೂಮವನಪ್ಪಲಿ ಮೋಹದ ಭೋಗದ ಕನಸನು ಮುರಿದು |2|
ಹೃದಯದ ಹಕ್ಕಿಯು ಆಗಸವಾಳಲಿ ಸೋಗಿನ ಸೊಬಗಿನ ಪೊರೆಯನು ಹರಿದು || ಓ ದಾರಿಗನೇ ಪ್ರಿಯ ನೇಹಿಗನೇ ||

ಬಾಳೆಲ್ಲವ ಮುಡಿಪಾಗಿಡು ವೀರನೆ ದಿನದಿನವೂ ಹೊಸ ಹೊಸ ಸಾಹಸಕೆ |2|
ಧ್ಯೇಯದ ಆ.. ಆನಂದದಿ ವಿಹರಿಸು ಹರಡಲಿ ಚಿರ ಕೀರ್ತಿಯು ಯುಗ ಯುಗಕೆ
ಓ ದಾರಿಗನೇ ಪ್ರಿಯ ನೇಹಿಗನೇ, ಗೈಯುವ ಬಾ ನವಯುಗ ನಿರ್ಮಾಣ

ಸಮಾಜದೇವತೆಗರ್ಪಿತವಾಗಲಿ ನಮ್ಮೆಲ್ಲ ತನು ಮನ ಧನ ಪ್ರಾಣ || ಓ ದಾರಿಗನೇ ಪ್ರಿಯ ನೇಹಿಗನೇ ||

Post new comment

The content of this field is kept private and will not be shown publicly.
  • Lines and paragraphs break automatically.

More information about formatting options