Kaledihudu kaavirulu - ಕರವ ಜೋಡಿಸಬನ್ನಿ



  • Title: Kaledihudu kaavirulu
  • Genre: GitaBharati
  • Language: Kannada
  • Theme: Patriotic
  • Length: 6:23 minutes (2.24 MB)
  • Format: MP3 Mono 22kHz 48Kbps (VBR)

ಕರವ ಜೋಡಿಸಬನ್ನಿ ಈ ರಾಷ್ಟ್ರಕಾರ್ಯದಲಿ
ಸ್ವರವ ಕೂಡಿಸಬನ್ನಿ ಒಕ್ಕೊರಲು ಘೋಷದಲಿ |
ನವಯುಗದ ನಿರ್ಮಾಣ ಗೈವ ಶುಭ ಆಶಯಕೆ
ಆಕೃತಿಯ ಮೂಡಿಸಲು ಜಾಗೃತಿಯ ಸಾಧಿಸಲು ||

ಉತ್ತುಂಗ ಸಂಸ್ಕೃತಿಯ ವಾರಸಿಕೆ ಎಮಗಿಹುದು
ತಾಯ್ನೆಲದ ಉನ್ನತಿಯ ಆದರ್ಶ ಗುರಿಯಿಹುದು
ಕಷ್ಟಗಳನೆದುರಿಸುವ ಕೆಚ್ಚೆದೆಯ ಬಲವಿಹುದು
ವೈರಿಗಳ ವ್ಯೂಹಗಳ ಭೇದಿಸುವ ಛಲವಿಹುದು |೧||

ದಮನ ನಿರ್ಬಂಧಗಳ ಅಂಜಿಕೆಯು ನಮಗಿಲ್ಲ
ಆಳುವರಸರ ಕೃಪೆಯ ಆಸರೆಯ ಹಂಗಿಲ್ಲ
ಕಠಿಣ ಅಗ್ನಿ ಪರೀಕ್ಷೆಗಳ ಗೆದ್ದು ಬಂದಿಹೆವು
ಮರಣ ಕೂಪದಿ ಧುಮುಕಿ ಮೇಲೆದ್ದು ಬಂದಿಹೆವು ||೨||

ಕಾಶ್ಮೀರದಾ ಕೂಗು ನಿಮಗೆ ಕೇಳಿಸದೇನು?
ತಾಯೊಡಲ ತಳಮಳವು ಮನವ ಬಾಧಿಸದೇನು
ಮರೆಯುತಿರೆ ಎಲ್ಲೆಲ್ಲೂ ದ್ರೋಹ ವಿಚ್ಛಿದ್ರತೆಯು
ಮೈಮರೆತು ಮಲಗಿದರೆ ಎಲ್ಲಿಹುದು ಭದ್ರತೆಯು? ||೩||

ನೀವು ಕಿವಿಗೊಡಬೇಡಿ ಸ್ವಾರ್ಥಿಗಳ ನುಡಿಗಳಿಗೆ
ಆಜ್ಯವನು ಎರೆಯದಿರಿ ಕುಟಿಲತೆಯ ಕಿಡಿಗಳಿಗೆ
ಸಹಕರಿಸಿ ಬೋಧನೆಗೆ ಬಲವೀವ ಸಾಧನೆಗೆ
ಹಿಂದು ರಾಷ್ಟ್ರೀಯತೆಯ ಪ್ರಬಲ ಪ್ರತಿಪಾದನೆಗೆ ||೪||

karava jODisabanni I rAShTrakAryadali
svarava kUDisabanni okkoralu GOShadali |
navayugada nirmANa gaiva SuBa ASayake
AkRutiya mUDisalu jAgRutiya sAdhisalu ||

uttuMga saMskRutiya vArasike emagihudu
tAynelada unnatiya AdarSa guriyihudu
kaShTagaLanedurisuva keccedeya balavihudu
vairigaLa vyUhagaLa BEdisuva Calavihudu |1||

damana nirbaMdhagaLa aMjikeyu namagilla
ALuvarasara kRupeya Asareya haMgilla
kaThiNa agni parIkShegaLa geddu baMdihevu
maraNa kUpadi dhumuki mEleddu baMdihevu ||2||

kASmIradA kUgu nimage kELisadEnu?
tAyoDala taLamaLavu manava bAdhisadEnu
mareyutire ellellU drOha vicCidrateyu
maimaretu malagidare ellihudu Badrateyu? ||3||

nIvu kivigoDabEDi svArthigaLa nuDigaLige
Ajyavanu ereyadiri kuTilateya kiDigaLige
sahakarisi bOdhanege balavIva sAdhanege
hiMdu rAShTrIyateya prabala pratipAdanege ||4||


Here is the actual song's script in kannada:

ಕಳೆದಿಹುದು ಕಾದಿರುಳು, ಕರಗಿಹುದು ಕಾರ್ಮುಗಿಲು
ಇಂದು ಹಿಂದುಭಾಸ್ಕರನ ಉದಯಕಾಲ, ನಾಡಪರಿವರ್ತನೆಯ ಪರ್ವಕಾಲ ।।

ಉಷೆಯುದಿಸಿ ಬಂದಿಹಳು, ನಿಷೆಯುಸಿರ ನೀಗಿಹಳು
ಅರುಣಕಿರಣದ ಪ್ರಭೆಗೆ ಸ್ವಾಗತವ ಕೋರಿಹಳು
ಮೈಮರೆತು ಮಲಗಿದ್ದ ನಾಡುಮೇಲೆದ್ದಿಹುದು
ದಾಸ್ಯದವಶೇಷವದು ಧರೆಗುರುಳಿ ಬಿದ್ದಿಹುದು
ಇಂದು ಹಿಂದುಭಾಸ್ಕರನ ಉದಯಕಾಲ, ನಾಡಪರಿವರ್ತನೆಯ ಪರ್ವಕಾಲ ।।

ಪುಟಪುಟದ ಇತಿಹಾಸ ಸಟೆಯ ಧಿಕ್ಕರಿಸಿಹುದು
ದಿಟದ ಧೀಮಂತಿಕೆಯ ದಿಟ್ಟತನ ಧರಿಸಿಹುದು
ದ್ರೋಹಿಗಳು ಒಡ್ಡಿರುವ ಭೀಕರ ಸವಾಲುಗಳ
ಕಟಿಬದ್ಧ ಯುವಜನತೆ ಛಲದಿ ಸ್ವೀಕರಿಸಿಹುದು
ಇಂದು ಹಿಂದುಭಾಸ್ಕರನ ಉದಯಕಾಲ, ನಾಡಪರಿವರ್ತನೆಯ ಪರ್ವಕಾಲ ।।

ಎಚ್ಚೆತ್ತ ಕೆಸರಿಗೆ ವನದೊಳೆದುರಾರಿಹರು
ತುಂಬಿಪೊರೆವಂಬುಧಿಯ ತಡೆವಜನರಾರಿಹರು
ಬೆಂಬಲಕೆ ಇಹರೆಮಗೆ ಭಾರತದ ಜನಕೋಟಿ
ಮುನ್ನುಗ್ಗಿ ಸಾಗುವೆವು ವಿಘ್ನವೆಲ್ಲವ ದಾಟಿ
ಇಂದು ಹಿಂದುಭಾಸ್ಕರನ ಉದಯಕಾಲ, ನಾಡಪರಿವರ್ತನೆಯ ಪರ್ವಕಾಲ ।।

ಮುರಿದಿರಲು ಸಂಧಾನ ಕರೆದಿರಲು ಸಂಗ್ರಾಮ
ಎದ್ದು ನಿಂತಿಹವಿಂದು ಗಿರಿನಗರವನಗ್ರಾಮ
ರಾಮರಾಜ್ಯದ ರಚನೆಗೈವ ಶುಭಹಾರೈಕೆ
ಪೂರ್ಣ ರಾವಣಪಡೆಗೆ ಕೊಟ್ಟಕೊನೆಯೇಚ್ಚರಿಕೆ
ಇಂದು ಹಿಂದುಭಾಸ್ಕರನ ಉದಯಕಾಲ, ನಾಡಪರಿವರ್ತನೆಯ ಪರ್ವಕಾಲ ।।

song title in kannada is wrong and even the lyrics.

very good songs for youths

Post new comment

The content of this field is kept private and will not be shown publicly.
  • Lines and paragraphs break automatically.

More information about formatting options